top of page

Basaveshwara Hospital

ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದಿಂದ ಗುಯಿಲಾಳುವಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯು ಹಿರಿಯೂರು ತಾಲ್ಲೂಕಿನ ಗುಯಿಲಾಳು ಗ್ರಾಮದಲ್ಲಿ ಜುಲೈ 14, 2025 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿತ್ತು. ಈ ಶಿಬಿರದಲ್ಲಿ ತೆಗೆದ ಆಯ್ದ ಚಿತ್ರಗಳು ಇಲ್ಲಿವೆ.

 

 ಶಿಬಿರದಲ್ಲಿ ಒದಗಿಸಲಾದ ಸೇವೆಗಳು

 

ಬಸವೇಶ್ವರ ವೈದ್ಯರ ತಂಡವು ಈ ಶಿಬಿರದಲ್ಲಿ ಸಾರ್ವಜನಿಕರಿಗೆ ಸಾಮಾನ್ಯ ವೈದ್ಯಕೀಯ ಸಮಸ್ಯೆಗಳಾದ ಸಕ್ಕರೆ ಕಾಯಿಲೆ, ರಕ್ತದೊತ್ತಡ (ಬಿಪಿ), ಆಯಾಸ, ಉಬ್ಬಸ, ಹರ್ನಿಯಾ, ಅಪೆಂಡಿಸೈಟಿಸ್‌, ಪೈಲ್ಸ್‌ ನಂತಹ ಶಸ್ತ್ರಚಿಕಿತ್ಸೆ ಅಗತ್ಯವಿರುವ ಕಾಯಿಲೆಗಳು, ಸ್ತ್ರೀ ರೋಗ ತೊಂದರೆಗಳು, ಮತ್ತು ಕಣ್ಣಿನ ತೊಂದರೆಗಳ ಉಚಿತ ತಪಾಸಣೆಯನ್ನು ನಡೆಸಿತು. ಅಲ್ಲದೆ, ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವ ರೋಗಿಗಳಿಗೆ ಸೂಕ್ತ ಅರಿವು ಮೂಡಿಸಲಾಯಿತು.

 

 ಕಾರ್ಯಕ್ರಮದ ಮುಖ್ಯ ಉದ್ದೇಶಗಳು

 

 ಹೆಚ್ಚಿನ ತಪಾಸಣೆ ಮತ್ತು ಅಗತ್ಯ ಚಿಕಿತ್ಸೆಯನ್ನು ಒದಗಿಸುವುದು.

 ಆರೋಗ್ಯ ಮತ್ತು ಪೋಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು.

 

ಮುಂದಿನ ಶಿಬಿರಗಳು

 

ಈ ಉಚಿತ ತಪಾಸಣಾ ಶಿಬಿರಗಳು ಜುಲೈ ತಿಂಗಳಲ್ಲಿ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಉಪಕೇಂದ್ರಗಳಲ್ಲಿ ನಡೆಯಲಿವೆ. ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯಕೀಯ ತಜ್ಞರು ಈ ಎಲ್ಲಾ ಶಿಬಿರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ.

 

ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಚಿತ್ರದುರ್ಗ.



 
 
 

1 Comment


I observe that the analytical tone is preserved throughout the text. The evidence is logically stacked. The website offers further contextual mapping on this topic. Engagement analysis is supported by references to interactive digital services.

Visit this page

Like
bottom of page