ಬಸವೇಶ್ವರ ಆಸ್ಪತ್ರೆಯಿಂದ ಹಾಯ್ಕಲ್ ಮತ್ತು ಗೌಡಿಹಳ್ಳಿಯಲ್ಲಿ ಉಚಿತ ಆರೋಗ್ಯ ಶಿಬಿರ
- Shakti Prasad
- Jun 13
- 1 min read
ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವತಿಯಿಂದ ದಿ.11.06.2025 ರಂದು ಚಿತ್ರದುರ್ಗ ತಾಲ್ಲೂಕಿನ ಹಾಯ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಹೊಳಲ್ಕೆರೆ ತಾಲ್ಲೂಕಿನ ಗೌಡಿಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರದ ಆಯ್ದ ಚಿತ್ರಗಳು.
ಈ ಶಿಬಿರದಲ್ಲಿ ಬಸವೇಶ್ವರ ವೈದ್ಯರ ತಂಡದಿಂದ ಸಾಮಾನ್ಯ ವೈದ್ಯಕೀಯ ಖಾಯಿಲೆಗಳಾದ ಸಕ್ಕರೆ ಖಾಯಿಲೆ, ಬಿ ಪಿ, ಆಯಾಸ, ಉಬ್ಬಸ, ಶಸ್ತ್ರಚಿಕಿತ್ಸೆ ಅಗತ್ಯವಿರುವ ಹರ್ನಿಯಾ ಅಪೆಂಡಿಸೈಟಿಸ್, ಪೈಲ್ಸ್, ಸ್ತ್ರೀ ರೋಗ ತೊಂದರೆಗಳು, ಕಣ್ಣಿನ ತೊಂದರೆಗಳ ಉಚಿತ ತಪಾಸಣೆಯನ್ನು ಮಾಡಿ, ರೋಗಿಗಳಿಗೆ ಹೆಚ್ಚಿನ ಮುಂದುವರೆದ ಚಿಕಿತ್ಸೆಯ ಅಗತ್ಯತೆಯ ಬಗ್ಗೆ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದ ಮುಖ್ಯ ಉದ್ದೇಶ:
✅ ಹೆಚ್ಚಿನ ತಪಾಸಣೆ ಮತ್ತು ಅಗತ್ಯ ಚಿಕಿತ್ಸೆ ಒದಗಿಸುವುದು
✅ ಆರೋಗ್ಯ ಮತ್ತು ಪೋಷಣೆಯ ಬಗ್ಗೆ ಜಾಗೃತಿ ಮೂಡಿಸುವುದು
ಈ ಉಚಿತ ತಪಾಸಣಾ ಶಿಬಿರಗಳು ಜೂನ್ ಮಾಹೆಯಲ್ಲಿ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರ / ಉಪಕೇಂದ್ರಗಳಲ್ಲಿ ನಡೆಯಲಿವೆ. ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯಕೀಯ ತಜ್ಞರು ಈ ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವವರು.
ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಚಿತ್ರದುರ್ಗ.

















Comments